ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಹೆಚ್.ವಿಶ್ವನಾಥ್, ಸಿದ್ದರಾಮಯ್ಯ, ಜಿ. ಪರಮೇಶ್ವರ್, ಡಿ.ಕೆ. ಶಿವಕುಮಾರ್ ಹೇಳಿಕೆಗಳಿಂದ ಗೊಂದಲ ಇರುವುದು ಸ್ಪಷ್ಟವಾಗುತ್ತೆ. ಹೀಗಂತ ಬಿಜೆಪಿ ಸಂಸದೆ ಹೇಳಿದ್ದಾರೆ.ಸಿಎಮ್ ಆಗುವ ಆಸೆಯಿಂದ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.ಕುಮಾರಸ್ವಾಮಿ ಅಪ್ಪ, ಮಗ, ಅಣ್ಣನ ಮಗನ ಚುನಾವಣೆ ಮಾಡಿ ಸುಸ್ತಾದ್ರಾ? ಸಮ್ಮಿಶ್ರ ಸರ್ಕಾರ ನಡೆಸಲಾಗದೆ ಸುಸ್ತಾದ್ರಾ? ಸ್ಪಷ್ಟನೆ ಕೊಡಲಿ ಎಂದು ಆಗ್ರಹ ಮಾಡಿದ್ರು.ಖರ್ಗೆಯಂತ ಹಿರಿಯ ನಾಯಕರು ಮುಖ್ಯಮಂತ್ರಿ ಆಗಬೇಕಿತ್ತು.