ಕಳೆದ ವರ್ಷ, ವಿದೇಶಿ ಮದ್ಯಕ್ಕಿಂತ ದೇಶಿ ಮದ್ಯ ಹೆಚ್ಚಾಗಿ ಮಾರಾಟವಾಗಿರುವ ವಿಷಯ ಬೆಳಕಿಗೆ ಬಂದಿದೆ. 2023ರಲ್ಲಿ ಭಾರತೀಯ ಕಂಪೆನಿ ಗಳು, ವಿದೇಶಿ ಕಂಪೆನಿ ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಸಿವೆ. ಕಳೆದ ವರ್ಷ ಭಾರತದಲ್ಲಿ ಮಾರಾಟವಾದ ಮದ್ಯ ದಲ್ಲಿ ಭಾರತೀಯ ಕಂಪನಿಗಳ ಮದ್ಯ ಶೇ.53 ರಷ್ಟು ಮಾರಾಟವಾಗಿದೆ. . ಇತಿಹಾಸದಲ್ಲೇ ಇಂತಹದ್ದೊಂದು ಮೊದಲ ಬಾರಿಗೆ ಸಾಧನೆ ದಾಖಲಾಗಿದೆ. ಜಾಗತಿಕ ದೈತ್ಯ ಕಂಪೆನಿಗಳಾದ ಗ್ರೆನ್ಸಿವೆಟ್, ಮೆಕಾಲನ್, ಲಗಾವುಲಿನ್, ಟಾಲಿಸ್ಕರ್ನಂತಹ ದೈತ್ಯ ಕಂಪೆನಿಗಳನ್ನು ಭಾರತೀಯ ಕಂಪೆನಿಗಳು ಹಿಂದೆ ಹಾಕಿವೆ.