ಬಸವನಗುಡಿ ಪೊಲೀಸ್ ಠಾಣೆ ಮುಂದೆ ಹೈ ಡ್ರಾಮಾ

ಬೆಂಗಳೂರು| geetha| Last Modified ಗುರುವಾರ, 25 ನವೆಂಬರ್ 2021 (15:06 IST)
ಸಂಗೀತ ನಿರ್ದೇಶಕ ಅವರ ಹೇಳಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ನೊಟೀಸ್ ನೀಡಲಾಗಿತ್ತು. ಹೀಗಾಗಿ ಅವರು ಇಂದು ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು.
 
ಈ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡುವ ಸಲುವಾಗಿ ನಟ ಚೇತನ್ ಆಗಮಿಸುವುದಾಗಿ ತಿಳಿಸಿದ್ದರು.ಇದಕ್ಕೆ ಹಿಂದೂ ಪರ ಸಂಘಟನೆಗಳ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಠಾಣೆಯ ಮುಂದೆ ಆಗಮಿಸಿದ್ದಾರೆ. ಹಂಸಲೇಖ ಅವರ ಪರ ಕನ್ನಡ ಪರ ಸಂಘಟನೆಗಳು ಆಗಮಿಸಿದ್ದು, ಹೈಡ್ರಾಮಾ ಸೃಷ್ಟಿಯಾಗಿದೆ.
 
ನಟ ಚೇತನ್ ಮಧ್ಯಪ್ರವೇಶಕ್ಕೆ ಭಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ನಟ ಚೇತನ್ ಮಧ್ಯಪ್ರವೇಶ ಅಗತ್ಯವಿಲ್ಲ ಎಂದಿದ್ದಾರೆ. ಚೇತನ್ ನಡೆಯನ್ನು ಟೀಕಿಸಿರುವ ಭಜರಂಗದಳ, ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರು ಈ ದೇಶದ ನಾಗರಿಕನೇ ಅಲ್ಲ. ಚೇತನ್‌ ರನ್ನು ಠಾಣೆಯೊಳಗೆ ಬಿಟ್ಟುಕೊಳ್ಳಲೇಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :