ಅಸಾಧಾರಣ ಬಾಲಕನೊಬ್ಬ ಎಂಟು ವರ್ಷಕ್ಕೆ ಹೈಸ್ಕೂಲ್ ಪದವಿ ಪೂರೈಸಿ ಅಚ್ಚರಿ ಮೂಡಿಸಿದ್ದಾನೆ. 18 ತಿಂಗಳಲ್ಲಿ ಹೈಸ್ಕೂಲ್ ಮುಗಿಸಿರೋ ಬಾಲಕನಿಗೆ ಇದೀಗ 9 ವಯಸ್ಸಾಗಿದ್ದು ಕೆಲವೇ ತಿಂಗಳಲ್ಲಿ ಇಂಜಿನಿಯರ್ ಪದವೀಧರನಾಗಲಿದ್ದಾನೆ. ಲಾರೆಂಟ್ ಸೈಮನ್ಸ್ ಎನ್ನೋ ಅಪ್ರತಿಮ ಬುದ್ಧಿವಂತ ಹುಡುಗನೇ ಈ ಸಾಧನೆ ಮಾಡಿರೋದು. ಲಾರೆಂಟ್ ಗೆ ಬುದ್ಧಿಮತ್ತೆ ಹೆಚ್ಚಿರೋದ್ರಿಂದ ಈ ಸಾಧನೆ ಸಾಧ್ಯವಾಗಿದೆ. ಇನ್ನೇನು ಕೆಲ ದಿನಗಳಲ್ಲಿಯೇ ಪಿಹೆಚ್ಡಿ ಪ್ರವೇಶ ಪಡೆದುಕೊಳ್ಳುವತ್ತ ಬಾಲಕ ಪ್ರಯತ್ನ ಮುಂದುವರಿಸಿದ್ದಾನೆ.