ಬೆಂಗಳೂರಿನಲ್ಲಿ ಹೈಸ್ಪೀಡ್ ರೈಲಿಗೆ ಕಲ್ಲು ತೂರಾಟ ಮಾಡಲಾಗಿದೆ.ಮೈಸೂರಿನಿಂದ ತಮಿಳುನಾಡಿನ ರಾಜಧಾನಿ ಚೆನ್ನೈಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ವಂದೇ ಭಾರತ್ ಎಕ್ಸ್ಪ್ರೆಸ್(Vande Bharat Express)ನ ಗಾಜುಗಳಿಗೆ ಹಾನಿಯಾಗಿದೆ.ಕಲ್ಲು ಎಸೆದಿರುವ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ.ರೈಲ್ವೆ ಇಲಾಖೆ ಪ್ರಕರಣ ದಾಖಲಿಸಿದೆ. ಕೋಚ್ನ ಎರಡು ಕಿಟಕಿಗಳಿಗೂ ಹಾನಿಯಾಗಿದೆ.ಕೃಷ್ಣರಾಜಪುರಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ನಡುವೆ ಘಟನೆ ನಡೆದಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಇಂದ ಮಾಹಿತಿ ನೀಡಲಾಗಿದೆ. ವಂದೇ ಭಾರತ್