ರಾಜ್ಯದ ಕಡಲ ತೀರದಲ್ಲಿ ಕಣ್ಗಾವಲಿಡಲು ಬಂದಿರೋ ಹೈಟೆಕ್ ಶಿಪ್ ಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.ಮಂಗಳೂರು ಕಡಲ ತೀರಕ್ಕೆ ಕಣ್ಗಾವಲಿಗಾಗಿ ಅತ್ಯಾಧುನಿಕ ಹಡಗು ವರಹ ಎಂಬ ಶಿಪ್ ಆಗಮಿಸಿದೆ. ಈ ನೂತನ ಶಿಪ್ ನ್ನು ಪಣಂಬೂರು ಕೋಸ್ಟ್ಗಾರ್ಡ್ ಕೇಂದ್ರದಲ್ಲಿ ಹಿರಿಯ ಅಧಿಕಾರಿ ರಾಜ್ ಕಮಲ್ ಸಿನ್ಹಾ, ಲಕ್ಷ್ಮೀಕಾಂತ್ ಗಜಿಭಿಯೆ, ಸಿಐಎಸ್ಎಫ್ ಅಧಿಕಾರಿ ಅಶುತೋಷ್ ಗೌರ್ ಮೊದಲಾದವರು ಸ್ವಾಗತಿಸಿದ್ರು. ಕರ್ನಾಟಕ ಕರಾವಳಿಯಲ್ಲಿ ಕಣ್ಗಾವಲು ಇಡಲಿದೆ.ಲಾರ್ಸನ್ ಆ್ಯಂಡ್ ಟರ್ಬೊ ಈ ನೂತನ ಹಡಗನ್ನು ನಿರ್ಮಿಸಿದೆ.