ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 12ನೇ ಬಜೆಟ್ ಮಂಡಿಸಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಅವರ ಐದನೇ ಬಜೆಟ್ ಆಗಿದೆ. ಬಜೆಟ್ನ ಆರಂಭದಲ್ಲಿ ಸಿಎಂ ಹೇಳಿದ ಮಾತುಗಳನ್ನು ಕೆಳಗೆ ಕೊಟ್ಟಿವೆ ಓದಿ ನೋಡಿ- ಸನ್ಮಾನ್ಯ ಸಭಾಧ್ಯಕ್ಷರೇ ನಾನು 2017-18ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸುತ್ತಿದ್ದೇನೆ. ಆಯವ್ಯಯ ಪತ್ರವೆಂದರೆ ಸರ್ಕಾರದ ಒಳನೋಟವನ್ನು ಬಿಂಬಿಸುತ್ತದೆ. ಆಯವ್ಯಯ ಪತ್ರವು ಸರ್ವಾಂಗೀಣ ಅಭಿವೃದ್ಧಿಯ ಆಶಯ ಪತ್ರವಾಗಿದೆ. ಈ ಮೂಲಕ ಸುಖ, ಶಾಂತಿ ನೆಮ್ಮದಿಯ