ಕಡಲು ತೀರದ ಪ್ರದೇಶದಲ್ಲಿ ಸದ್ದಿಲ್ಲದೇ ಹಿಂದೂ ಟಾಸ್ಕ್ ಫೋರ್ಸ್ ಆರಂಭಗೊಳ್ಳುತ್ತಿದೆಯೇ ಎನ್ನುವ ಅನುಮಾನ ಜನರನ್ನು ಕಾಡಲಾರಂಭಿಸಿದೆ. ಫೈರ್ ಬ್ರಾಂಡ್ ಖ್ಯಾತಿಯ ಸ್ವಾಮೀಜಿಯೊಬ್ಬರ ನೇತೃತ್ವದಲ್ಲಿ ಟಾಸ್ಕ ಫೋರ್ಸ್ ಅಸ್ತಿತ್ವಕ್ಕೆ ಬರಲಿದೆ ಎಂಬ ಸುದ್ದಿ ಬಲವಾಗಿ ಹರಡುತ್ತಿದೆ. ಲವ್ ಜಿಹಾದ್ ಮತ್ತು ಮತಾಂತರ ತಡೆಗಟ್ಟಲು ಹಿಂದೂ ಟಾಸ್ಕ್ ಫೋರ್ಸ್ ಆರಂಭಗೊಳ್ಳಲಿದೆ ಎನ್ನಲಾಗಿದ್ದು, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಇದರ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.ಹಿಂದುತ್ವವನ್ನು ಯಾರು ಗೌರವಿಸುತ್ತಾರೆಯೋ ಅವರನ್ನು ನಾವು ಗೌರವಿಸುತ್ತೇವೆ ಎನ್ನುವ