ದನದ ವ್ಯಾಪಾರಿ ಹುಸೇನಬ್ಬ( 62) ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಎಸ್ಸೈ ಬಂಧನ ಆಗಿದೆ ಎಂದು ಮೂಲಗಳು ತಿಳಿಸಿವೆ. ಡಿ.ಎನ್.ಕುಮಾರ್ ಬಂಧಿತ ಹಿರಿಯಡ್ಕ ಠಾಣಾ ಎಸ್ಸೈ ಆಗಿದ್ದಾರೆ. ಪೊಲೀಸ್ ಜೀಪು ಚಾಲಕ ಗೋಪಾಲ್ ಹಾಗೂ ಹೆಡ್ ಕಾನ್ ಸ್ಟೇಬಲ್ ಮೋಹನ ಕೋತ್ವಾಲ್ ಬಂಧನವಾಗಿದೆ ಎನ್ನಲಾಗಿದೆ. ಬಜರಂಗದಳ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದ ಹುಸೇನಬ್ಬ ಸಾವನ್ನಪ್ಪಿದ್ದರು. ಘಟನಾ ಸ್ಥಳದಲ್ಲಿದ್ದ ಎಸ್ಸೈ ಕುಮಾರ್ ಕೃತ್ಯ ಬೆಳಕಿಗೆ ಬಂದ ನಂತರ ಎಸ್ಸೈ ಡಿ.ಎನ್.ಕುಮಾರ್ ಅಮಾನತಾಗಿದ್ದರು.