ನದಿ ನೀರಿನ ರಭಸಕ್ಕೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದ 200 ವರ್ಷಗಳ ಐತಿಹಾಸಿಕ ಸೇತುವೆ, ನೋಡ ನೋಡುತ್ತಲೇ ಕಣ್ಮರೆಯಾಯಾಗಿದೆ. ಕಾವೇರಿಯ ರಭಸಕ್ಕೆ 200 ವರ್ಷಗಳ ಐತಿಹಾಸಿಕ ಸೇತುವೆ ಕೊಚ್ಚಿಹೋಗಿರುವ ಘಟನೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಕೋಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತಕ್ಕೆ ಹೋಗುವ ಮುನ್ನಾ ಸಿಗುವ ಐತಿಹಾಸಿಕ ವೆಸ್ಲಿ ಸೇತುವೆ ನೀರಿನ ಸೆಳವಿಗೆ ಸಿಲುಕಿ ಇನ್ನಿಲ್ಲದಂತಾಗಿದೆ. ಟಿಪ್ಪು ಸುಲ್ತಾನ್ ರಾಜಾಡಳಿತದ 1818 ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ