ಬೆಂಗಳೂರಿಗರಿಗೆ ಹಬ್ಬದ ಸಂಭ್ರಮ ನೀಡುತ್ತಿದ್ದ ಪರಿಷೆ ಕೋವಿಡ್ ಕರಿನೆರಳಿನಿಂದ ಕಳೆದೆರಡು ವರ್ಷಗಳಿಂದ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಕಡ್ಲೆಕಾಯಿ ಪರಿಷೆ ಎಂಜಾಯ್ ಮಾಡಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ದೇವಸ್ಥಾನದ ಸುತ್ತಲೂ ಜಾತ್ರೆಯ ವಾತಾವರಣ ಮನೆಮಾಡಿದ್ದು ಕಡಲೆಕಾಯಿ ಪರಿಷೆಯಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದರು. ವಾಡಿಕೆಯಂತೆ ಬಸವನಗುಡಿಯ ದೊಡ್ಡ ಬಸವೇಶ್ವರ ದೇವಾಲಯ ಆವರಣದಲ್ಲಿ ಪ್ರತಿ ವರ್ಷವೂ ಕೂಡ ಕಡೇ ಕಾರ್ತಿಕ ಸೋಮವಾರದಿಂದ ಕಡ್ಲೆಕಾಯಿ ಪರಿಷೆ ನಡೆಯುತ್ತದೆ. ಆದರೆ, ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಡಲೆಕಾಯಿ