ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಹಿವಾಟದ ಮೀನುಗಾರಿಕೆಗೆ ಮಹಾಮಳೆ ದೊಡ್ಡ ಹೊಡೆತವನ್ನೆ ನೀಡಿದೆ. ಮಹಾಮಳೆ ಮತ್ತು ಕಡಲು ಪ್ರಕ್ಷುಬ್ದದಿಂದ ಕಳೆದ ಕೆಲವು ದಿನಗಳಿಂದ ಮೀನುಗಾರಿಕೆ ಕೂಡ ಸ್ಥಬ್ದವಾಗಿದೆ. ದಿನವೊಂದಕ್ಕೆ ಮಂಗಳೂರು ಮೀನುಗಾರಿಕ ಬಂದರಿನಲ್ಲಿ 52 ಕೋಟಿಯಷ್ಟು ವ್ಯವಹಾರ ನಡೆಯುತ್ತಿತ್ತು. ಎಂಟು ದಿನದ ಲೆಕ್ಕಾಚಾರ ಮಾಡಿದರೆ ಮಹಾಮಳೆಯಿಂದ ಮೀನುಗಾರಿಕೆಗೆ ಸುಮಾರು 400 ಕೋಟಿಯಷ್ಟು ಪೆಟ್ಟು ಬಿದ್ದಿದೆ.ಮೀನುಗಳ ಸಂತಾನೋತ್ಪತ್ತಿ ಮತ್ತು ಕಡಲು ಪ್ರಕ್ಷುಬ್ದತೆಯಿರುವ ಕಾರಣಕ್ಕೆ ಪ್ರತಿ ವರ್ಷದಂತೆ ಜೂನ್ ಒಂದರಿಂದ ಜುಲೈ 30