ವಿಶ್ವ ಏಡ್ಸ ಜಾಗೃತಿ ದಿನಾಚರಣೆ ಅಂಗವಾಗಿ ನಡೆದ ಎಚ್ ಐ ವಿ ತಡೆಗಟ್ಟುವ ಕುರಿತಾದ ಜಾಥಾ ಗಮನ ಸೆಳೆಯಿತು.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಎಚ್ ಐ ವಿ ತಡೆಗಟ್ಟುವ ಕುರಿತು ಜಾಥಾ ನಡೆಸಲಾಯಿತು.ಚಿಕ್ಕೊಡಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಿಂದ ಆರಂಭಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೋಗುವ ಮೂಲಕ ಏಡ್ಸ ರೋಗದ ಕುರಿತು ಅರಿವು ಮೂಡಿಸಲಾಯಿತು.ಮೆರವಣಿಗೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಶಾಲಾ ಮಕ್ಕಳು, ಆಶಾ ಕಾರ್ಯಕರ್ತೆಯರು ಹಾಗೂ ನ್ಯಾಯವಾದಿಗಳು ಪಾಲ್ಗೊಂಡಿದ್ದರು.