Widgets Magazine

HIV, ಕೊರೊನಾಗೆ ವ್ಯಕ್ತಿ ಸಾವು

ಧಾರವಾಡ| Jagadeesh| Last Modified ಶುಕ್ರವಾರ, 26 ಜೂನ್ 2020 (20:38 IST)
ಡೆಡ್ಲಿ ಕೊರೊನಾ ಹಾಗೂ ಹೆಚ್ ಐ ವಿಯಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.

ಧಾರವಾಡ ಜಿಲ್ಲೆಯಲ್ಲಿ ಕೋವಿಡ್ -19 ಹಾಗೂ ಹೆಚ್ ಐವಿ ಏಡ್ಸ್ ಹಾಗೂ ಇತರ ಅನಾರೋಗ್ಯ ಲಕ್ಷಣಗಳಿಂದ ಬಳಲುತ್ತಿದ್ದ ಪಿ-8753 42 ವರ್ಷದ ವ್ಯಕ್ತಿಯು ಕಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಕೆಮ್ಮು, ಆಹಾರ ನುಂಗಲು ತೊಂದರೆ, ನಿಶ್ಯಕ್ತಿ ಮತ್ತಿತರ ಲಕ್ಷಣಗಳಿಂದ ಬಳಲುತ್ತಿದ್ದರು. ಪಿ- 6839 ಅವರೊಂದಿಗೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಜೂನ್ 21 ರಂದು ಕೋವಿಡ್ ದೃಢಪಟ್ಟಿತ್ತು.  ಶ್ವಾಸಕೋಶದ ಸಮಸ್ಯೆ  ಮೊದಲಾದ ಕಾರಣಗಳಿಂದ ರಾತ್ರಿ 11.15 ಕ್ಕೆ ಕೊನೆಯುಸಿರೆಳೆದರು.

ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿಯಲ್ಲಿ         ಜೂನ್  ಜರುಗಿತು.


ಇದರಲ್ಲಿ ಇನ್ನಷ್ಟು ಓದಿ :