ದೇಶದೆಲ್ಲೆಡೆ ಹೋಳಿ ಹಬ್ಬದ ಸಡಗರ ಮನೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಜನ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಉತ್ಸವದಲ್ಲಿ ಮಹಿಳೆಯರು ವಿವಿಧ ನೃತ್ಯಗಳನ್ನು ಮಾಡಿ ನೋಡುಗರನ್ನು ರಂಜಿಸಿದರು. ಸುತ್ತಮುತ್ತಲ ನೂರಾರು ಅಪಾರ್ಟ್ಮೆಂಟ್ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.