ಕುಟುಂಬ ಹಾಗೂ ಸಮಾಜ ಸರಿಯಾಗಿರಬೇಕು ಎಂದರೆ ಮನೆಯಲ್ಲೇ ಬಿದ್ದಿರಬೇಕು. ಹೀಗಂತ ರಾಜ್ಯದ ಸಚಿವರೊಬ್ಬರು ಹೇಳಿದ್ದಾರೆ. ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ಜನರ ಜೀವದ ಜೊತೆ ಹಾಗೂ ಜೀವನದ ಜೊತೆಗೆ ಯಾರೂ ಚೆಲ್ಲಾಟ ಆಡಬಾರದೆಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ವಿನಾಕಾರಣ ಅಡ್ಡಾಡುತ್ತಾ ಕೊರೊನಾ ಹರಡಿಸಬೇಡಿ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.