ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಮೇಟಿ ಕೇಸ್ ನಲ್ಲಿ ಎಫ್ ಐಆರ್ ಹಾಕಿರಲಿಲ್ಲ. ತನಿಖೆ ನಡೆಸದೇ ಮೇಟಿಗೆ ಕ್ಲೀನ್ ಚಿಟ್ ನೀಡಲಾಗಿದೆ. ನಾವು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ನಾವು ಯಾರ ಪರವೂ ಇಲ್ಲ. ವಿರುದ್ಧವೂ ಇಲ್ಲ ಎಂದು ಹೇಳಿದ್ದಾರೆ.ಜಾರಕಿಹೊಳಿ ಬಂಧನದ ಬಗ್ಗೆ ಎಸ್ ಐಟಿ ನಿರ್ಧರಿಸಲಿದೆ. ತನಿಖೆಯಲ್ಲಿ ನಾನು ಮಧ್ಯೆ ಪ್ರವೇಶ ಮಾಡಲ್ಲ.