ಲಸಿಕೆ ಮಾರಾಟ ಮಾಡಿದ್ರೆ ಕಠಿಣ ಕ್ರಮ- ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು| pavithra| Last Modified ಸೋಮವಾರ, 24 ಮೇ 2021 (12:09 IST)
ಬೆಂಗಳೂರು : ಲಸಿಕೆ ಮಾರಾಟ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಲಸಿಕೆ ದಂಧೆ ಮಾಡಲು ಬಿಡಲ್ಲ. ಲಸಿಕೆ ದಂಧೆ ಮಾಡಿದ್ರೆ ಕಠಿಣ ಕ್ರಮ. ಲಸಿಕೆ ಕೊರತೆ ನೀಗಿಸಲು ಕ್ರಮ ಕೈಗೊಳ್ತೇವೆ ಎಂದು ಹೇಳಿದ್ದಾರೆ.> > ಲಾಕ್ ಡೌನ್ ಅನ್ನು ಇಂದಿನಿಂದ ಮತ್ತಷ್ಟು ಬಿಗಿಗೊಳಿಸುವಂತೆ ರಾಜ್ಯದ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅನಗತ್ಯವಾಗಿ ಓಡಾಡುವ ವಾಹನಗಳನ್ನು ಸೀಝ್ ಮಾಡಲಾಗುವುದು. ಅನಗತ್ಯ ಓಡಾಡುವವರನ್ನು ಸುಮ್ಮನೆ ಬಿಡುವುದಿಲ್ಲ. ಹಳ್ಳಿಗಳಲ್ಲಿ ಲಾಕ್ ಡೌನ್ ಪರಿಣಾಮ ಬೀರ್ತಿದೆ. ನಗರಗಳಲ್ಲಿ ಲಾಕ್ ಡೌನ್ ಉಲ್ಲಂಘನೆಯಾಗ್ತಿದೆ. ಹೀಗಾಗಿ ಮತ್ತಷ್ಟು ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :