ಇಂದ್ರಜಿತ್ ಲಂಕೇಶ್ ದೂರಿಗೆ ಸ್ಪಂದಿಸಿದ ಗೃಹಸಚಿವ ಬೊಮ್ಮಾಯಿ

ಬೆಂಗಳೂರು| Krishnaveni K| Last Modified ಗುರುವಾರ, 15 ಜುಲೈ 2021 (10:55 IST)
ಬೆಂಗಳೂರು: ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ತಮ್ಮನ್ನು ಭೇಟಿಯಾಗಿ ಸಲ್ಲಿಸಿದ ದೂರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದು ತನಿಖೆಗೆ ಸೂಚಿಸಿದ್ದಾರೆ.  
> ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಮಿತಿಮೀರುತ್ತಿದೆ. ಯುವ ಜನ ಡ್ರಗ್ ವ್ಯಸನಕ್ಕೆ ಹಾಳಾಗುತ್ತಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ‍್ಳಲು ಗೃಹಸಚಿವರಿಗೆ ಮನವಿ ಮಾಡುತ್ತೇನೆ ಎಂದು ಮಾಧ‍್ಯಮಗಳಿಗೆ ನೀಡಿದ ಸುತ್ತೋಲೆಯಲ್ಲಿ ಇಂದ್ರಜಿತ್ ಹೇಳಿದ್ದರು.>   ಇದಾದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸ್ನೇಹಿತರು ಮೈಸೂರಿನ ಹೋಟೆಲ್ ಒಂದರಲ್ಲಿ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ಗೃಹ ಸಚಿವರು ತಮಗೆ ಇಂದ್ರಜಿತ್ ಲಂಕೇಶ್ ದೂರಿನಲ್ಲಿ ಹೇಳಿದ ವಿಚಾರವನ್ನಷ್ಟೇ ತನಿಖೆಗೆ ಸೂಚಿಸಿರುವುದಾಗಿ ಹೇಳಿದ್ದಾರೆ. ಹೀಗಾಗಿ ದರ್ಶನ್ ಪ್ರಕರಣವನ್ನೂ ವಿಚಾರಣೆ ನಡೆಸುತ್ತಾರಾ ಎಂಬುದು ಸ್ಪಷ್ಟವಾಗಿಲ್ಲ.ಇದರಲ್ಲಿ ಇನ್ನಷ್ಟು ಓದಿ :