ಬೆಂಗಳೂರು : ಸಿಲಿಕಾನ್ ಸಿಟಿಯ ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಸಿಹಿಸುದ್ದಿ ನೀಡುತ್ತಿದೆ. ಮನೆ ಬಳಿಯಿಂದಲೇ ಮೆಟ್ರೋ ನಿಲ್ದಾಣಕ್ಕೆ ತೆರಳಲು ಬಸ್ ಸೇವೆ ಕಲ್ಪಿಸಲು ಮುಂದಾಗಿದೆ. ಬಿಎಂಟಿಸಿ ಮತ್ತು ಬೆಂಗಳೂರು ಮೆಟ್ರೋ ನಿಗಮ ಒಪ್ಪಂದ ಮೇರೆಗೆ ಬಿಎಂಟಿಸಿ ಮಿನಿಬಸ್ ಆರಂಭಿಸ್ತಾ ಇದ್ದು ಶೀಘ್ರದಲ್ಲೆ ಟೆಂಡರ್ ಕರೆಯಲಿದೆ.ಬೆಂಗಳೂರಿನಂತಹ ಮಹಾನಗರದಲ್ಲಿ ಬಿಎಂಟಿಸಿ ಸೇವೆ ಹೇರಳವಾಗಿದೆ. ಮುಖ್ಯರಸ್ತೆಗಳಿಂದ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸ್ತಿವೆ, ಬೆಂಗಳೂರಿನ ಗಲ್ಲಿಗಳಿಂದ, ಅಪಾರ್ಟ್ ಮೆಂಟ್ಗಳಿಂದ ನೇರವಾಗಿ ಬಸ್ ಸೇವೆ ಇಲ್ಲ.ಹೀಗಾಗಿ