ಬೆಳಗಾವಿ: ಕಾರ್ಯಕ್ರಮವೊಂದರ ಉದ್ಘಾಟನೆಗೆ ಬಂದಿದ್ದ ಅರಣ್ಯ ಸಚಿವ ರಮಾನಾಥ್ ರೈಯವರನ್ನು ಜೇನು ನೊಣಗಳು ಅಟ್ಟಾಡಿಸಿ ಓಡಿಸಿದ ಘಟನೆ ನಡೆದಿದೆ. ಬೆಳಗಾವಿಯಲ್ಲಿ ಜೈವಿಕ ಉದ್ಯಾನವನ ಉದ್ಘಾಟನೆಗೆಂದು ಬಂದಿದ್ದ ಸಚಿವರು ವೇದಿಕೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಜೇನು ನೊಣಗಳು ದಾಳಿ ಮಾಡಿವೆ. ವೇದಿಕೆಯಲ್ಲಿದ್ದ ಗಣ್ಯರಿಗೆ ಜೇನು ನೊಣಗಳು ಕಚ್ಚಿವೆ. ಸಚಿವ ರಮಾನಾಥ್ ಕಣ್ಣಿನ ಬಳಿ ಜೇನು ಕಚ್ಚಿದೆ.ತಕ್ಷಣ ಅಲ್ಲಿದ್ದ ಅಧಿಕಾರಿಗಳು ಸಚಿವರನ್ನು ಕಾರಿನಲ್ಲಿ ಕೂರಿಸಿ ಅಪಾಯವಾಗದಂತೆ ನೋಡಿಕೊಂಡರು. ಜೇನು ನೊಣಗಳು ದಾಳಿ ಮಾಡಿದ್ದರಿಂದ ಸಚಿವರು