ಹೊರಗೆ ಜಾಲಿಯಾಗಿ ಸುತ್ತಾಡಿಕೊಂಡು ಬ ರೋಣ ಬಾ ಎಂದು ಯುವಕನನ್ನು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯುವಕರಿಗೆ ಮಹಿಯನ್ನು ಪರಿಚಯಿಸಿ ನಂತರ ಸಲುಗೆ ಬೆಳೆಯುವಂತೆ ಮಾಡಿ ದೋಚುತ್ತಿದ್ದ ಮಂಡ್ಯದ ರವಿಚಂದ್ರ, ಕಾರ್ತಿಕ್, ಕಿರಣ್ ಹಾಗೂ ಚನ್ನಪಟ್ಟಣ ಮೂಲದ ಮಂಜು ಬಂಧಿತರು ಇತ್ತೀಚೆಗೆ ಕಾರ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಎಂಬ