ಯುವತಿಯರಿಬ್ಬರು ಸೇರಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮಂಗಳೂರಿನ ಉಪ್ಪಿನಂಗಡಿ ರೆಸಾರ್ಟ್ ವೊಂದಕ್ಕೆ ಹುಡುಗಿಯರಿಬ್ಬರು ಗಿರಾಕಿ ಹುಡುಗರನ್ನು ಕರೆದುಕೊಂಡು ಹೋಗುತ್ತಿದ್ದರು.ಆಗ ಹುಡುಗಿಯ ಕಡೆಯವರು ತಾವು ಪೊಲೀಸರು ಅಂತ ಹೇಳಿ ಹುಡುಗಿಯರೊಂದಿಗೆ ಸಿಕ್ಕಿಬಿದ್ದ ಗ್ರಾಹಕರಿಂದ ಹಣ ದೋಚುತ್ತಿದ್ದರು. ಕೇಸ್ ನ ಜಾಡು ಹಿಡಿದು ಹೋದ ಪೊಲೀಸರಿಗೆ ವಿಟ್ಲದ ಶರೀಫ್ ಹಾಗೂ ಕುಶಾಲನಗರದ ಲೋಹಿತ್ ಅನ್ನೋರನ್ನು ಬಂಧನ ಮಾಡಿದ್ದಾರೆ.ಹನಿಟ್ರ್ಯಾಪ್ ನ ಕಿಂಗ್ ಪಿನ್ ಆಗಿರೋ ಇಬ್ಬರು ಹುಡುಗಿಯರ ಬಂಧನಕ್ಕೆ ಬಲೆ ಬೀಸಿದ್ದಾರೆ.