ಹೊರನಾಡ ಅಧಿದೇವತೆ ಶ್ರೀ ಅನ್ನಪೂರ್ಣೇಶ್ವರಿಗೂ ಸರ್ಕಾರ ಹಾಗೂ ಅಧಿಕಾರಿಗಳಂದ್ರೆ ಅಪನಂಬಿಕೆ ಹಾಗೂ ಭಯ. ಈ ಮಳೆಗಾಲದಲ್ಲಿ ಕಿತ್ತೋದ ರಸ್ತೆ ಮುಂದಿನ ಮಳೆಗಾಲಕ್ಕೆ ದುರಸ್ತಿಯಾದ್ರೆ ಪುಣ್ಯ ಎನ್ನುವಂತಾಗಿದೆ.ಇವರನ್ನ ನೆಚ್ಚಿಕೊಂಡ್ರೆ ಆಗೋದಿಲ್ಲ ಎಂದು ತನ್ನ ರಸ್ತೆಯನ್ನ ತಾನೇ ಸರಿಪಡಿಸಿಕೊಂಡಿದ್ದಾಳೆ ದೇವಿ. ಈ ವರ್ಷ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭದ್ರೆಯ ರಭಸಕ್ಕೆ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಶಿಥಿಲಾವಸ್ಥೆ ತಲುಪಿತ್ತು. ಒಂದೇ ತಿಂಗಳಲ್ಲಿ ಈ ಸೇತುವೆ ಏಳು ಬಾರಿ ಮುಳುಗಿತ್ತು.