ಬೆಂಗಳೂರು ನಗರದಲ್ಲಿರುವ ಕಬ್ಬನ್ ಪಾರ್ಕ್ ಒಳಭಾಗದಲ್ಲಿ ವಾಹನ ಸಂಚಾರ ಮಾಡುವವರು ಇನ್ನು ಮುಂದೆ ಎಚ್ಚರಿಕೆ ವಹಿಸಲೇಬೇಕು. ಕಬ್ಬನ್ ಪಾರ್ಕ್ನಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಹೊಸ ರೂಲ್ಸ್ ಜಾರಿಯಾಗಿದ್ದು, ಅಪ್ಪಿ, ತಪ್ಪಿ ಈ ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ ಕಟ್ಟಬೇಕಾಗಿದೆ. ಇನ್ಮುಂದೆ ಕಬ್ಬನ್ ಪಾರ್ಕ್ ಒಳಭಾಗದಲ್ಲಿ ವಾಹನ ಓಡಿಸುವಾಗ ಹಾರ್ನ್ ಮಾಡುವಂತಿಲ್ಲ. ಕಾರಣ ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ನೋಡಲೆಂದೇ ಲಕ್ಷಾಂತರ ಮಂದಿ ಬಂದು ಹೋಗ್ತಾರೆ. ಇದರ