ಬೆಂಗಳೂರಿನ ರಸ್ತೆಗಳಲ್ಲಿ ಬಾಯ್ತೆರೆದಿರುವ ಗುಂಡಿಗೆ ಮತ್ತೊಂದು ದಂಪತಿ ಬಲಿಯಾಗಿದೆ. ಮೈಸೂರು ರಸ್ತೆಯ ಫ್ಲೈಓವರ್`ನಲ್ಲಿ ಗುಂಡಿಯನ್ನ ತಪ್ಪಿಸಲು ಹೋದ ಬೈಕ್`ಗೆ ತಮಿಳುನಾಡಿನ ಬಸ್ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಅಸುನೀಗಿರುವ ಘಟನೆ ನಡೆದಿದೆ. ಆಂಥೋನಿ ಜೋಸೆಫ್ ಮತ್ತು ಸಗಾಯಿ ಮೇರಿ ನಿನ್ನೆ ತಡರಾತ್ರಿ ಜೆ.ಜೆ. ನಗರಕ್ಕೆ ಸಂಚರಿಸುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ. ಗುಂಡಿಗಳಲ್ಲೇ ತುಂಬಿರುವ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಗುಂಡಿ ತಪ್ಪಿಸಲು ಹಠಾತ್ ಬ್ರೇಕ್ ಹಾಕಿದ್ದಾರೆ. ಈ ಸಂದರ್ಭ ಹಿಂಬದಿ