ರೌಡಿ ಶೀಟರ್ ನ ಮನೆಗೆ ನುಗ್ಗಿ ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ರೌಡಿ ಶೀಟರ್ ಮಣಿ ಉರ್ಫ್ ಸುಬ್ರಮಣಿ ತನ್ನ ಮನೆಯಲ್ಲಿ ಕೊಲೆಗೀಡಾದವನಾಗಿದ್ದಾನೆ. ಕೊಲೆಯತ್ನ ಹಾಗೂ ದರೋಡೆ ಕೇಸ್ ಗಳಲ್ಲಿ ರೌಡಿ ಶೀಟರ್ ಮಣಿ ಭಾಗಿಯಾಗಿದ್ದನು.ದುಷ್ಕರ್ಮಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.