ನಗರಕ್ಕೆ ಮೆಟ್ರೊ ರೈಲು ವಿಸ್ತರಣೆ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸುವ ಸಂಬಂಧ ಬೆಂಗಳೂರಿನಲ್ಲಿ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ತಿಳಿಸಿದರು.ಅಜುಂ ಪರ್ವೇಜ್ ಅವರು ಬೆಂಗಳೂರು ಉಪ ನಗರ ರೈಲು ಯೋಜನೆಯನ್ನು ಬೆಂಗಳೂರಿನ ಹೊರವಲಯದ ಹೊಸಕೋಟೆ, ನೆಲಮಂಗಲ, ಬಿಡದಿ, ಮಾಗಡಿ ಮತ್ತು ಆನೇಕಲ್ ಸೇರಿದಂತೆ ಸುತ್ತಲಿನ ಇತರೇ ಪಟ್ಟಣಗಳಿಗೆ ವಿಸ್ತರಿಸಲು ಅವಕಾಶ ಇದೆ. ಈ ಸಂಬಂಧ ಕರ್ನಾಟಕ