ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಹಳೆಯಂಗಡಿ ಸಮೀಪದ 10ನೇ ತೋಕೂರು ಬಳಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಪೂರ್ತಿ ಮಳೆ ಸುರಿದಿತ್ತು. ಪರಿಣಾಮ ಓಂಕಾರೇಶ್ವರಿ 2ನೇ ಅಡ್ಡರಸ್ತೆಯಲ್ಲಿರುವ ಶೋಭಾ ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ರಾತ್ರಿ ಮನೆಮಂದಿ ಮಲಗಿದ್ದ ವೇಳೆ ಮನೆಯ ಹಂಚುಗಳು ಬೀಳುತ್ತಿದ್ದ ಶಬ್ದಕ್ಕೆ ಮನೆಮಂದಿ ಎಚ್ಚೆತ್ತು ನೋಡಿದಾಗ ಮನೆಯ ಹಂಚು, ಪಕ್ಕಾಸುಗಳು