ಹಾಡು ಹಗಲಲ್ಲಿಯೇ ಮನೆಯೊಂದರ ಬೀಗ ಮುರಿದು ಮನೆ ಕಳ್ಳತನ ಮಾಡಿರುವ ಘಟನೆ ನಡೆದಿದೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಎಕ್ಸ೦ಬಾ ಪಟ್ಟಣದಲ್ಲಿ ಈ ಕಳ್ಳತನ ನಡೆದಿದೆ. ಕೃಷ್ಣಾ ನಸಲಾಪೂರೆ ಎಂಬುವರಿಗೆ ಸೇರಿದ ಮನೆ ಕಳ್ಳತನ ಮಾಡಲಾಗಿದೆ.ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಬೀಗ ಮುರಿದು ಕಳ್ಳತನ ಎಸಗಲಾಗಿದೆ. 50 ಗ್ರಾಂ ಬಂಗಾರದ ಆಭರಣ ಹಾಗೂ 50 ಸಾವಿರ ರೂ. ಕಳ್ಳತನ ಮಾಡಲಾಗಿದೆ. ಸದಲಗಾ ಠಾಣೆಯಲ್ಲಿ ದೂರು ದಾಖಲಾಗಿದೆ.