ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸಿದ್ದ ಒಂದು ವರ್ಷದ ಮಗು ಚೇತರಿಸಿಕೊಂಡಿದೆ. ಈ ಮಗುವಿನ ಜೊತೆಗೆ ಇನ್ನೂ ಮೂವರು ಗುಣಮುಖರಾಗಿದ್ದಾರೆ. ಕೊರೋನಾ ಸೋಂಕಿಗೆ ತುತ್ತಾಗಿದ್ದ ಕಲಬುರಗಿ ತಾಲೂಕಿನ ಕವಲಗಾ ಗ್ರಾಮದ ಒಂದು ವರ್ಷದ ಗಂಡು ಮಗು ಸೇರಿದಂತೆ 4 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ ಪಾಸಿಟಿವ್ ಪತ್ತೆಯಾದ 53