ಮೊಬೈಲ್ ಕಳೆದುಕೊಂಡು ಚಿತ್ರನಟ ಶಶಿಕುಮಾರ್ ಪರದಾಡಿದ ಘಟನೆ ನಡೆದಿದೆ.ಚಿತ್ರದುರ್ಗ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಮೊಬೈಲ್ ಕಳವು ಮಾಡಿದ್ದ ಅಪರಿಚಿತ ಯುವಕ ಪರಾರಿಯಾಗಿದ್ದನು. ಬೇಸಿಗೆ ಮಕ್ಕಳ ಶಿಬಿರ ಕಾರ್ಯಕ್ರಮದಲ್ಲಿ ನಡೆದ ಘಟನೆ ಇದಾಗಿದೆ.ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಶಶಿಕುಮಾರ್ ರ ಮೊಬೈಲ್ ನ್ನು ಯುವಕ ಎಗರಿಸಿದ್ದನು. ಕಾರ್ಯಕ್ರಮ ಮುಗಿದ ಬಳಿಕ ಮೊಬೈಲ್ ಕಳವು ಆಗಿತ್ತು. ಹೀಗಾಗಿ ಮೊಬೈಲ್ ಗಾಗಿ ಅರ್ಧ ಗಂಟೆ ಕಾಲ ಪರದಾಡಿದ್ರು