ಮೈತ್ರಿ ಸರಕಾರದ ಪಕ್ಷಗಳು ಹಾಗೂ ಬಿಜೆಪಿ ಮುಖಂಡರು ಆಡಿಯೋ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆಸುತ್ತಿದ್ದರೆ, ಚರ್ಚೆ ನಡುವೆಯೇ ಆಡಿಯೋದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಎದ್ದು ಹೊರನಡೆದಿದ್ದಾರೆ.ಸದನದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಶಾಸಕ ಶಿವನಗೌಡ ನಾಯಕ್ ಜತೆ ರೇಣುಕಾಚಾರ್ಯ ಹೊರ ನಡೆದಿದ್ದಾರೆ.ಆಡಿಯೋದಲ್ಲಿ ಶಿವನಗೌಡ ನಾಯಕ್ ಹಾಗೂ ಶರಣಗೌಡ ಮಾತನಾಡಿದ್ದರು. ಈ ಆಡಿಯೋವನ್ನು ಸಿಎಂ ಬಿಡುಗಡೆಗೊಳಿಸಿದ್ದರು. ಇದು ಭಾರಿ ಚರ್ಚೆಗೆ ಸದನದಲ್ಲಿ ಕಾರಣವಾಗುತ್ತಿದೆ. ಆಡಿಯೋದಲ್ಲಿ ಸ್ಪೀಕರ್ ರನ್ನು ಬುಕ್ ಮಾಡಿದ್ದೇವೆ