Widgets Magazine

ಮೋಹರಂನಲ್ಲಿ ಮಾರಾಮಾರಿ ನಡೆದದ್ದು ಹೇಗೆ?

ಚಿಕ್ಕೋಡಿ| Jagadeesh| Last Modified ಬುಧವಾರ, 11 ಸೆಪ್ಟಂಬರ್ 2019 (17:41 IST)
ಮೊಹರಂ ಪಾಂಜಾ ಮತ್ತು ತಾಬೂತಗಳನ್ನು ವಿಸರ್ಜಿಸಲು ಗುಗ್ಗಳ ಭಾವಿಗೆ ತೆರಳುತ್ತಿರುವ ಸಂದರ್ಭದಲ್ಲಿ ಎರಡು ಕೋಮುಗಳ ಯುವಕರ ನಡುವೆ ಹೊಡೆದಾಟ  ನಡೆದಿದೆ.

ಎರಡು ಕೋಮಿನ ನಡುವೆ ಮಾರಾಮಾರಿ ನಡೆದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ವರದಿಯಾಗಿದೆ.  

ಮೋಹರಂ ಕೊನೆಯ ದಿನ ಪಾಂಜಾ ಮತ್ತು ತಾಬೂತಗಳನ್ನು ವಿಸರ್ಜಿಸಲು ಗುಗ್ಗಳ ಭಾವಿಗೆ ತೆರಳುತ್ತಿರುವ ಸಂದರ್ಭದಲ್ಲಿ ಯುವಕರು ಹೊಡೆದಾಡಿಕೊಂಡಿದ್ದಾರೆ.

ಘಟನೆಯಲ್ಲಿ ಐದಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೋಸಿನ ಮುಲ್ಲಾ, ಮಹಾವೀರ ಸೋಲಾಪುರೆ, ಮಲ್ಲಿಕಾರ್ಜುನ ಪಾಟೀಲ್, ಅಜೀತ ರಾಣೆಕೊನ್ನುರ  ಗಾಯಗೊಂಡವರು.


 
ಇದರಲ್ಲಿ ಇನ್ನಷ್ಟು ಓದಿ :