ನರೇಗಾ ಕೆಲಸಕ್ಕೆಂದು ಜನರು ಎಂದಿನಂತೆ ಹೊರಡುವಾಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡ ದಾರುಣ ಘಟನೆ ಸಂಭವಿಸಿದೆ.ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಾರುವನಹಳ್ಳಿ ಕೋಳಿ ಫಾರಂ ಬಳಿ ರಾಷ್ಟ್ರೀಯ ಹೆದ್ದಾರಿ 53ರಲ್ಲಿ ಬೆಳಿಗ್ಗೆ ಬೆಂಗಳೂರಿನಿಂದ ಗಂಗಾವತಿಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ ಟ್ರಾಕ್ಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರನ್ನು ಹೊಸಪೇಟೆ ತಾಲೂಕಿನ ಚಿಲಕನಹಟ್ಟಿಯ ಯರಿಸ್ವಾಮಿ(30) ಹಾಗೂ ರೇಣುಕಮ್ಮ(30) ಎಂಬುವರಾಗಿದ್ದಾರೆ. 28 ಜನ