ಆತ ಹೈಫೈನಂತೆ ಕಂಡುಬರುತ್ತಿದ್ದ ವ್ಯಕ್ತಿಯಾಗಿದ್ದ. ಆದರೆ ಕ್ಷಣಮಾತ್ರದಲ್ಲಿ ಮೊಬೈಲ್ ಎಗರಿಸಿ ಅಂಗಡಿ ಮಾಲೀಕನನ್ನೇ ಬೇಸ್ತುಬೀಳಿಸಿ ಪರಾರಿಯಾಗಿ ತನ್ನ ಕೈಚಳಕ ತೋರಿದ್ದಾನೆ.ಖತರನಾಕ್ ಕಳ್ಳನೊಬ್ಬನ ಕೈಚಳಕಕ್ಕೆ ಮೊಬೈಲ್ ಅಂಗಡಿಯ ಮಾಲೀಕನೊಬ್ಬ ದಂಗಾಗಿ ಹೋಗಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಶ್ರೀ ರಾಮ ಸರ್ಕಲ್ ನಲ್ಲಿರುವ ಮೋನಿತಾ ಮೊಬೈಲ್ಸ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ. ಮೊಬೈಲ್ ಕದಿಯುತ್ತಿರುವ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿವೋ ವೈ 81 ಮಾಡೆಲ್ ನ 15000 ರೂ