ಬೃಹತ್ ಆಲದ ಮರವೊಂದರಲ್ಲಿ ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.ಸಾಲದ ಬಾಧೆಗೆ ಬೇಸತ್ತು ಕೂಲಿ ಕಾರ್ಮಿಕ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ದಾವಣಗೆರೆ ನಗರದ ಎಪಿಎಂಸಿ ಆವರಣದಲ್ಲಿ ಈ ದುರ್ಘಟನೆ ನಡೆದಿದೆ. ಉಸ್ಮಾನ್ ಸಾಬ್ (25) ನೇಣಿಗೆ ಶರಣಾದ ಕಾರ್ಮಿಕನಾಗಿದ್ದಾನೆ. ಎಪಿಎಂಸಿ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಉಸ್ಮಾನ್ ಸಾಬ್, ದಾವಣಗೆರೆ ನಗರದ ಭಾಷಾನಗರದ ನಿವಾಸಿಯಾಗಿದ್ದು, ದಲ್ಲಾಳಿ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಕೆಲ ಕಡೆ ಸಾಲ