ಲಾಕ್ಡೌನ್ ಹಿನ್ನೆಲೆಯಲ್ಲಿ ಕೊಂಕಣ ಪ್ರದೇಶದಲ್ಲಿ ಅತಂತ್ರರಾಗಿದ್ದರು ಇದೀಗ ತಮ್ಮ ತವರು ರಾಜ್ಯಕ್ಕೆ ಮರಳಿದ್ದಾರೆ. 67,178 ಜನರನ್ನು ಕೊಂಕಣ ರೈಲ್ವೆಯು ವಿಶೇಷ ಶ್ರಮಿಕ್ ರೈಲುಗಳ ಮೂಲಕ ಅವರ ತವರು ರಾಜ್ಯಕ್ಕೆ ಕಳುಹಿಲಾಗಿದೆ. ಕೋವಿಡ್ -19 ಸೊಂಕು ಹರಡದಂತೆ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿತ್ತು. ಹೀಗಾಗಿ ಕೊಂಕಣ ಪ್ರದೇಶದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಆಗ ಆಯಾ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಕೊಂಕಣ ರೈಲ್ವೆಯು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕೊಂಕಣ ಪ್ರದೇಶದಿಂದ ಸಂಕಷ್ಟಕ್ಕೀಡಾಗಿದ್ದ