ಬೆಂಗಳೂರು: ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ಆರೋಗ್ಯವಾಗಿದ್ದ ನವಜಾತ ಶಿಶುವೊಂದು ದಿಢೀರನೆ ಸಾವನ್ನಪ್ಪಿದ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ಅನೀತಾ ಎಂಬುವವರು ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ನಿನ್ನೆ ಮಧ್ಯಾಹ್ನದವರೆಗೆ ಮಗು ಆರೋಗ್ಯವಾಗಿದೆ ಎಂದ ವೈದ್ಯರು, ಸಂಜೆಯ ಹೊತ್ತಿಗೆ ಮಗು ಸಾವನಪ್ಪಿದ ಬಗ್ಗೆ ತಿಳಿಸಿದಾಗ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಲುಣಿಸಿದಾಗ ಮಗುವಿನ ಎದೆ ಸವರಬೇಕು. ಮಗುವಿಗೆ ಹಾಲುಣಿಸಿ ಸರಿಯಾಗಿ ನೋಡಿಕೊಳ್ಳದ ಕಾರಣ