ಸ್ನೇಹಿತನನ್ನು ಕೊಂದು 200 ತುಂಡುಗಳಾಗಿ ಕತ್ತರಿಸಿ ಶೌಚಾಲಯದೊಳಗೆ ಹಾಕಿದಾತ ಆಮೇಲೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಮುಂಬೈ, ಶನಿವಾರ, 26 ಜನವರಿ 2019 (06:42 IST)

ಮುಂಬೈ : ಮರುಪಾವತಿ ಮಾಡದಿದದ್ದಕ್ಕೆ ತನ್ನ ಸ್ನೇಹಿತನನ್ನೇ 200 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿದ ಭೀಕರ ಘಟನೆ ಮುಂಬೈನಲ್ಲಿ ನಡೆದಿದೆ.


ಪಿಂಟು ಶರ್ಮಾ ಕೊಲೆ ಮಾಡಿದ ಆರೋಪಿ, ಗಣೇಶ್ ಕೊಲೆಯಾದ ವ್ಯಕ್ತಿ. ಪಿಂಟು ಶರ್ಮಾ ತನ್ನ ಗಣೇಶ್‌ ಗೆ ಪ್ರಿಂಟಿಂಗ್‌ ಪ್ರೆಸ್‌ ನಡೆಸಲು 1 ಲಕ್ಷ ರು. ಸಾಲ ನೀಡಿದ್ದ. ಈ ಪೈಕಿ 40000 ರು.ಗಳನ್ನು ಮಾತ್ರವೇ ಗಣೇಶ್‌ ಮರಳಿಸಿದ್ದ. ಉಳಿದ ಹಣ ಪಾವತಿ ಮಾಡದ ಹಿನ್ನಲೆಯಲ್ಲಿ ಇವರಿಬ್ಬರ ನಡುವೆ ಗಲಾಟೆ ನಡೆದು ಆ ವೇಳೆ ಪಿಂಟು ಗಣೇಶ್‌ ನನ್ನು ಕೊಲೆ ಮಾಡಿದ್ದಾನೆ. ಬಳಿಕ ಕೊಲೆ ಮಾಡಿದ ಸಾಕ್ಷಿ ಸಿಗಬಾರದು ಎಂದು ಆತನ ದೇಹವನ್ನು 200 ತುಂಡುಗಳಾಗಿ ಕತ್ತರಿಸಿ, ಅದನ್ನು ಶೌಚಾಲಯದೊಳಗೆ ಹಾಕಿ ಫ್ಲಶ್ ಮಾಡಿದ್ದಾನೆ.


ಆದರೆ ದೇಹದ ಭಾಗಗಳು ಶೌಚಾಲಯದ ಪೈಪ್‌ನಲ್ಲಿ ಸಿಕ್ಕಿಹಾಕಿಕೊಂಡು, ಬ್ಲಾಕ್ ಆದ ಕಾರಣ ಪೈಪ್‌ ಸ್ವಚ್ಛಗೊಳಿಸುವ ವೇಳೆ ಈ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಅನುಮಾನಗೊಂಡ ಪೊಲೀಸರು ಪಿಂಟುವನ್ನು ಬಂಧಿಸಿ  ವಿಚಾರಣೆ ನಡೆಸಿದಾಗ ಪಿಂಟು ತಾನು ಕೊಲೆ ಮಾಡಿದ ವಿಚಾರವನ್ನು ಒಪ್ಪಿಕೊಂಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತನ್ನ ಕ್ಷೇತ್ರವನ್ನು ಸರಿಯಾಗಿ ನೋಡಿಕೊಳ್ಳದ ಮೊಯ್ಲಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಬಿಎಸ್ ವೈ

ಚಿಕ್ಕಬಳ್ಳಾಪುರ : ಕೇಂದ್ರ ಸಂಸದನಾಗಿ ಅವನಿಗೆ ಕ್ಷೇತ್ರವನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ ಎಂದು ...

news

ನಟ ನಿಖಿಲ್ ರಲ್ಲಿ ಶಾರುಖ್, ಸಲ್ಮಾನ್ ಮೀರಿಸುವಷ್ಟು ಅಭಿನಯವಿದೆ ಎಂದ ಸಚಿವ!

ಸಲ್ಮಾನ್ ಖಾನ್, ಶಾರುಖ್ ಖಾನ್ ಮೀರಿಸುವಷ್ಟು ಅಭಿನಯವನ್ನು ನಟ ನಿಖಿಲ್ ಕುಮಾರಸ್ವಾಮಿ ಮಾಡಿದ್ದಾರೆ. ಹೀಗಂತ ...

news

ಟ್ರಾಫಿಕ್ ಕಿರಿಕಿರಿಗೆ ರಾಜಧಾನಿಗರು ತತ್ತರ!

ಒಂದೆಡೆ ಮೆಟ್ರೋ ಕಾಮಗಾರಿ ಮತ್ತೊಂದೆಡೆ ಎಲಿವೆಟೆಡ್ ಪ್ಲೇಓವರ್ ರಿಪೇರಿಯಿಂದ ಸಂಚಾರದಟ್ಟಣೆ ಅಧಿಕವಾಗಿ ...

news

ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರ ಶುರು

ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದಾದ ಅಂಚೆ ಕಚೇರಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ