ಬೆಂಗಳೂರು: ಕೊರೋನಾ ಬಂದರೆ 10 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿರುವ ಪೋಷಕರು ಈ ಮುನ್ನೆಚ್ಚರಿಕೆ ಕೈಗೊಳ್ಳುವುದು ಉತ್ತಮ. ಕೆಲವು ದಿನಗಳ ಮಟ್ಟಿಗೆ ನಿಮ್ಮ ಮಕ್ಕಳನ್ನು ಹೊರಗೆ, ನೆರೆಹೊರೆಯವರೊಂದಿಗೆ ಆಟವಾಡಲು ಬಿಡಬೇಡಿ. ಕೆಲವರು ಚಿಕ್ಕಮಕ್ಕಳನ್ನು ಕಂಡ ಕೂಡಲೇ ಮುದ್ದು ಮಾಡುವುದು, ಚುಂಬಿಸುವುದು ಇತ್ಯಾದಿ ಮಾಡಲು ಹೋಗುತ್ತಾರೆ. ಯಾರಿಗೂ ಈ ರೀತಿ ಮಾಡಲು ಅವಕಾಶ ಕೊಡಬೇಡಿ.ಸದ್ಯಕ್ಕೆ ಮಕ್ಕಳ ಕೂದಲು ಕತ್ತರಿಸಲು ಬ್ಯೂಟಿ ಪಾರ್ಲರ್ ಗಳಿಗೆ ಹೋಗದೇ ಇರುವುದೇ ಉತ್ತಮ. ಆಗಾಗ