ಕೃತಜ್ಞತೆ ಗುಣ ಹೊಂದಿರದವರ ಜೀವನ ಜೀವನವೇ ಅಲ್ಲ, ಅಂಥವರು ನಾಯಕರೂ ಅಲ್ಲ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವಾನಾಥ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಬೆಳೆಸಿದ ವ್ಯಕ್ತಿಗಳನ್ನು ದೂರುತ್ತಿರುವವರ ಮನೋಭಾವನೆಗೆ ಸದ್ಯದಲ್ಲೆ ಪ್ರತ್ಯುತ್ತರ ದೊರೆಯಲಿದೆ ಎಂದಿದ್ದಾರೆ. ಸಿದ್ದರಾಮಯ್ಯರನ್ನು ರಾಜಕೀಯವಾಗಿ ಬೆಳೆಸಿದವರು ದೇವೇಗೌಡ ಅವರೇ ಹೊರತು ರಾಮಕೃಷ್ಣ ಹೆಗಡೆ ಅಲ್ಲ. ಆದರೆ, ದೇವೇಗೌಡರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಇದರಿಂದ ನೀವು ಜನನಾಯಕರಲ್ಲ ಎಂಬುದು