ಬೆಂಗಳೂರು : ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸಲೀಲ್ ಪರೇಖ್ ಈ ವರ್ಷ ತಮ್ಮ ವೇತನವನ್ನು ಬರೋಬ್ಬರಿ ಶೇ.88 ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಈ ಹೆಚ್ಚಳದೊಂದಿಗೆ ಪರೇಖ್ ಇದೀಗ ವರ್ಷಕ್ಕೆ 79.75 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಈ ಹಿಂದೆ ಪರೇಖ್ 42 ಕೋಟಿ ರೂ. ವಾರ್ಷಿಕ ವೇತನವನ್ನು ಪಡೆಯುತ್ತಿದ್ದರು. ಇದೀಗ ತಮ್ಮ ಸಂಭಾವನೆಯಲ್ಲಿ ಭಾರೀ ಏರಿಕೆ ಕಂಡಿರುವುದರೊಂದಿಗೆ ದೇಶದಲ್ಲೇ ಅತೀ ಹೆಚ್ಚು ಮೊತ್ತದ ಸಂಭಾವನೆ ಪಡೆಯುವ ಸಿಇಒ ಎನಿಸಿಕೊಂಡಿದ್ದಾರೆ.ಇನ್ಫೋಸಿಸ್