ಕಾಂಗ್ರೆಸ್ ನಿಂದ ಭಾರೀ ಪ್ರತಿಭಟನೆ - 24 ರಂದು ಬೆಳಗಾವಿ ಚಲೋ

ಬೆಂಗಳೂರು| Jagadeesh| Last Modified ಬುಧವಾರ, 18 ಸೆಪ್ಟಂಬರ್ 2019 (16:03 IST)
ರಾಜ್ಯ ಹಾಗೂ ಕೇಂದ್ರ ಸರಕಾರಗಳು ನೆರೆ ಸಂತ್ರಸ್ಥರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿ ಅಂತ ಆರೋಪಿಸಿ ಕಾಂಗ್ರೆಸ್ ಭಾರೀ ಪ್ರತಿಭಟನೆಗೆ ಮುಂದಾಗಿದೆ.

ಸೆ. 24 ರಂದು ಬೆಳಗಾವಿಯಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಿತು. ಬೆಳಗಾವಿಯಲ್ಲಿ ತುರ್ತು ವಿಧಾನಸಭೆ ಅಧಿವೇಶನ ಕರೆಯುವಂತೆ ಆಗ್ರಹಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

10 ಸಾವಿರ ರೂ. ಬಿಟ್ಟರೆ ಸಂತ್ರಸ್ಥರಿಗೆ ಬೇರೆ ಒಂದು ನಯಾಪೈಸೆ ಸಿಕ್ಕಿಲ್ಲ. ಹೀಗಾಗಿ ಸರಕಾರದ ವಿರುದ್ಧ ನಡೆಯೋ ಪ್ರತಿಭಟನೆಯಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರು ಪಾಲ್ಗೊಳ್ಳಲಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :