ಇನ್ಮುಂದೆ ಅಪಾರ್ಟ್ ಮೆಂಟ್ ಕಟ್ಟಬೇಕು ಅಂತ ಇರೋರಿಗೆ ಸರಕಾರ ಶಾಕ್ ನೀಡಿದೆ. ಐದು ವರ್ಷ ಅಪಾರ್ಟ್ ಮೆಂಟ್ ಕಟ್ಟೋ ಹಾಗಿಲ್ಲವಂತೆ.ಅಪಾರ್ಟ್ಮೆಂಟ್ಗಳಲ್ಲಿ ಕುಡಿಯುವ ನೀರಿನಂಥ ಮೂಲಸೌಕರ್ಯ ಒದಗಿಸಿಕೊಡದೇ ಅಪಾರ್ಟ್ಮೆಂಟ್ಗಳನ್ನು ಮಾರಾಟ ಮಾಡುತ್ತಿರುವುದರಿಂದ 5 ವರ್ಷಗಳ ಕಾಲ ಅಪಾರ್ಟ್ ಮೆಂಟ್ ನಿರ್ಮಾಣಕ್ಕೆ ಅವಕಾಶ ನೀಡದೇ ಇರಲು ಚಿಂತನೆ ನಡೆಸಲಾಗಿದೆ. ಹೀಗಂತ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.ಸದಾಶಿವನಗರ ಗೃಹ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಸಾಕಷ್ಟು ಅಪಾರ್ಟ್ಮೆಂಟ್ ಕಟ್ಟಲಾಗಿದೆ. ಆದರೆ, ಮಾರಾಟ