ಮಹಾರಾಷ್ಟ್ರದ ಗಡಿಯಲ್ಲಿರುವ ಹುಲಿಜಂತಿಯಲ್ಲಿ ಇದೇ ನವೆಂಬರ್ 5 ರಿಂದ 11ರ ವರೆಗೆ ಜರುಗುವ ಮಾಳಿಂಗರಾಯ ಜಾತ್ರಾ ಮಹೋತ್ಸವ ಸಡಗರದಿಂದ ನಡೆಯಲಿದೆ.ಕಲಬುರಗಿ ಜಿಲ್ಲೆಯಿಂದ ಭಕ್ತಾದಿಗಳು ಪ್ರಯಾಣಿಸಲು ಅನುಕೂಲವಾಗುವಂತೆ ವಿವಿಧ ಮಾರ್ಗಗಳಲ್ಲಿ ಸಂಚಾರಕ್ಕೆ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-1ರ ವಿಭಾಗೀಯ ನಿಂತ್ರಣಾಧಿಕಾರಿ ಹೆಚ್.ಸಿ.ಬಸವರಾಜಪ್ಪ ತಿಳಿಸಿದ್ದಾರೆ. ಕಲಬುರಗಿ ಘಟಕ-1, ಸೇಡಂ, ಚಿಂಚೋಳಿ, ಚಿತ್ತಾಪುರ ಮತ್ತು ಕಾಳಗಿ ಘಟಕದಿಂದ ವಿಶೇಷ ಬಸ್ಗಳ ಸಂಚಾರ ನಡೆಯಲಿದ್ದು,