ಮಂಡ್ಯ-ಮೈಸೂರು ಜಿಲ್ಲಾಧಿಕಾರಿಗಳಾಗಿ ಪತಿ-ಪತ್ನಿಯದ್ದೇ ಕಾರುಬಾರು

ಮೈಸೂರು| Krishnaveni K| Last Updated: ಸೋಮವಾರ, 7 ಜೂನ್ 2021 (09:28 IST)
ಮೈಸೂರು: ರೋಹಿಣಿ ಸಿಂಧೂರಿ ನಿರ್ಗಮನದ ಬಳಿಕ ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಬಗಾದಿ ಗೌತಮ್ ಈಗ ಅದೃಷ್ಟ ಖುಲಾಯಿಸಿದೆ.
 

ಮೈಸೂರಿಗೆ ಗೌತಮ್ ಡಿಸಿಯಾದರೆ ಪಕ್ಕದ ಜಿಲ್ಲೆ ಮಂಡ್ಯಕ್ಕೆ ಅವರ ಪತ್ನಿ ಅಶ್ವತಿಯೇ ಜಿಲ್ಲಾಧಿಕಾರಿ. ಹೀಗಾಗಿ ಈಗ ಪತಿ-ಪತ್ನಿಗೆ ಸಮನ್ವಯದಿಂದ ಕೆಲಸ ಮಾಡುವ ಅವಕಾಶವೊಂದು ಸಿಕ್ಕಿದೆ.
 
ಆಂಧ್ರ ಮೂಲದವರಾದ ಗೌತಮ್, ಕೇರಳ ಮೂಲದ ಅಶ್ವತಿಯ ಐಎಎಸ್ ಸೇವೆಯಲ್ಲಿದ್ದಾಗಲೇ ವಿವಾಹವಾಗಿದ್ದರು. ಇದೀಗ ಪತಿ-ಪತ್ನಿ ಇಬ್ಬರೂ ಅಕ್ಕ-ಪಕ್ಕದ ಜಿಲ್ಲೆಗಳಿಗೇ ಜಿಲ್ಲಾದಿಕಾರಿಯಾಗಿರುವುದು ವಿಶೇಷ.
ಇದರಲ್ಲಿ ಇನ್ನಷ್ಟು ಓದಿ :