Widgets Magazine

ಪತ್ನಿಯಿರುವಾಗಲೇ ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ ಪತಿರಾಯ ಅರೆಸ್ಟ್

ರಾಮನಗರ| pavithra| Last Updated: ಶುಕ್ರವಾರ, 27 ಡಿಸೆಂಬರ್ 2019 (09:18 IST)
: ಒಬ್ಬಳ ಜೊತೆ ಸಾಂಪ್ರದಾಯಿಕವಾಗಿ ಮದುವೆಯಾಗಿ ಮನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ ಪತಿರಾಯನನ್ನು ಚೆನ್ನಪಟ್ಟಣ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಮಂಡ್ಯದ ಹಲಗೂರಿನ ಶ್ರೀನಿವಾಸ್ ಬಂಧಿತ ಆರೋಪಿ. ಈತ ಸುಕನ್ಯಾ ಎಂಬ ಯುವತಿಯನ್ನು ಸಾಂಪ್ರದಾಯಿಕವಾಗಿ ಮದುವೆಯಾಗಿ ಅವರಿಂದ ಲಕ್ಷಗಟ್ಟಲೆ ಹಣ ಪಡೆದಿದ್ದ. ಅಲ್ಲದೇ ಯಾವಾಗಲೂ ಮನೆಯಿಂದ ಹೊರಗಡೆಯೇ ಸುತ್ತುತಿದ್ದ ಈತ ದಾವಣಗೆರೆಯಲ್ಲಿ ಮತ್ತೊಂದು ಯುವತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ.


ಈ ವಿಚಾರ ತಿಳಿದ ಪತ್ನಿ ಸುಕನ್ಯಾ  ಚೆನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ನೀಡಿದ್ದು, ವಂಚನೆ ಪ್ರಕರಣದಡಿ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿ ಶ್ರೀನಿವಾಸ್ ಹಾಗೂ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :