ಭೋಪಾಲ್ : ಹೆಂಡತಿಯನ್ನು ಅಸಭ್ಯವಾಗಿ ನೋಡಿದ 45 ವರ್ಷದ ನೆರೆಮನೆಯವನನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯ ರಾಮ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ. ಮೃತ ವ್ಯಕ್ತಿ ಯಾವಾಗಲೂ ಪಕ್ಕದ ಮನೆಯಲ್ಲಿದ್ದ ಆರೋಪಿಯ ಪತ್ನಿಯನ್ನುಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಈ ಬಗ್ಗೆ ಪತ್ನಿ ತನ್ನ ಪತಿಗೆ ತಿಳಿಸಿದ್ದಾಳೆ. ಕೋಪಗೊಂಡ ಪತಿ ಆತನಿಗೆ ಎಚ್ಚರಿಕೆ ನೀಡಲು ಆತನ ಮನೆಗೆ ಹೋದಾಗ ಅವರ ನಡುವೆ ಘರ್ಷಣೆ ನಡೆದಿದೆ.