ಕಚ್ಚೆಹರುಕ ಪತಿಯ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬಳು ಆತನ ಹತ್ಯೆಗೆ ಸ್ಕೇಚ್ ರೂಪಿಸಿ ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ. ಪುಲಕೇಶಿ ನಗರದ ನಿವಾಸಿಯಾಗಿದ್ದ ಕುಮಾರ್ ಮತ್ತು ಡೋರಿನ್ ದಂಪತಿಗಳು ಆರಂಭದಲ್ಲಿ ನೆಮ್ಮದಿಯಾಗಿಯೇ ಸುಖಿ ಜೀವನ ಸಾಗಿಸುತ್ತಿದ್ದರು. ಆದರೆ, ಪತಿಯ ವರ್ತನೆ ಕೆಲವೊಮ್ಮೆ ಡೋರಿನ್ಗೆ ಆಕ್ರೋಶ ತರಿಸುತ್ತಿತ್ತು ಎನ್ನಲಾಗಿದೆ. ಪತಿ ಕುಮಾರ್ ಹಲವಾರು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಬಹಿರಂಗವಾದ ನಂತರ, ಆತನನ್ನು ಹಲವಾರು ಬಾರಿ ತಡೆಯಲು ಪ್ರಯತ್ನಿಸಿದರು ಯಾವುದೇ